Displaying items by tag: Purandara Dasaru

ಪೂರ್ವ ಜನ್ಮದಲಿ ನಾ ಮಾಡಿದ ಪಾಪದಿಂ ದುರ್ವಿಯೊಳು ಜನಿಸಿದೆನು ಕೃಷ್ಣ|| ಪ||

ಕಾರುಣ್ಯ ನಿಧಿ ಎನ್ನ ಕಾಯಬೇಕಯ್ಯ ಹರಿ ವಾರಿಜ ನಾಭ ಶ್ರೀ ಕೃಷ್ಣ|| ಅ.ಪ||

ಹುಟ್ಟಿದಂದಿಂದಿಗು ಸುಖವೆಂಬುದನು ಅರಿಯೆ ಕಷ್ಟ ಪಡುತಿಹೆನಯ್ಯ ಕೃಷ್ಣಾ|
ದಟ್ಟ ದಾರಿದ್ರ್ಯ ವನು ಪರಿಹರಿಸದಿರೆ ದೂರು ತಟ್ಟುವುದು ನಿನಗಯ್ಯ ಕೃಷ್ಣ|
ಕಾಸಿನ ಆಸೆಯನು ಮಾಡಿ ಬಹುದಿನದಿಂದ ಆಯಾಸದೊಳಗಿಹೆನು ಕೃಷ್ಣ|
ಆಸೆಯನು ಬಿಡಿಸೆಮಗೆ ದೋಷ ವನು ಪರಿಹರಿಸು ಸಾಸಿರ ನಾಮದ ಶ್ರೀ ಕೃಷ್ಣ||೧||

ಪೂರ್ವ ಜನ್ಮದಲಿ ನಾ ಮಾಡಿದ ಪಾಪದಿಂ ದುರ್ವಿಯೊಳು ಜನಿಸಿದೆನು ಕೃಷ್ಣ|| ಪ||

ಮುಟ್ಟಲಂಜುವರು ಬಂದುಗಳು ಕಂಡರೆ ಎನ್ನ ಅಟ್ಟಿಕೊಳುತಿಹರಯ್ಯ ಕೃಷ್ಣ|
ತೊಟ್ಟಿಲ ಶಿಶು ಬಾಯ ಬಿಡುವತೆರೆದಂತೆ ಕಂಗೆಟ್ಟು ಶೋಕಿಸುವೆನು ಕೃಷ್ಣ|
ತಂದೆ ತಾಯಿ ಯು ಇಲ್ಲ ಬಂದು ಬಳಗವು ಇಲ್ಲ ಇಂದೆನಗೆ ಗತಿಯೇನು ಕೃಷ್ಣ|
ಮಂದರಧರ ಶ್ರೀ ಪುರಂದರ ವಿಠ್ಠಲ ನೀ ಬಂದು ನೆಲೆಯಾಗಯ್ಯ ಕೃಷ್ಣ||೨||

ಪೂರ್ವ ಜನ್ಮದಲಿ ನಾ ಮಾಡಿದ ಪಾಪದಿಂ ದುರ್ವಿಯೊಳು ಜನಿಸಿದೆನು ಕೃಷ್ಣ|| ಪ||

ಕೃಷ್ಣ ಕೃಷ್ಣ ಕೃಷ್ಣ

This song makes you to realize on what purpose u are leaving, what will happen when you are aged and what for u leaved and achieved, and what u should have done and must do, Purandaradasaru easily made us to understand through this song. 
Dasarapadagalu is a realization.


Song: Poorva Janmadali Naa Maadida

Artiste : Puttur Narasimha Nayak

Lyrics : Purandara Dasaru

Music : Puttur Narasimha Nayak

Label : Sagar Music

Published in Dasara padagalu
Tagged under