Purandara Dasaru

  • Enagu Ane Ranga Ninagu Ane | ಎನಗೂ ಆಣೆ ರಂಗ ಭಕ್ತಿಗೀತೆ

    This song will really make you 100% Devotee,
    Fallow this Please implement in your life,
    Purandaradasaru made this song for all to get Devotion in Lord Krushna ಕೃಷ್ಣ,
    Dasarapadagalu has given a pathway to connect Lord.

    Enagu Ane Ranga Ninagu Ane | Krithis Of Sri Purandara Dasaru

    Full song lyrics :
    ಎನಗೂ ಆಣೆ ರಂಗ ನಿನಗೂ ಆಣೆ
    ಎನಗೂ ನಿನಗೂ ಇಬ್ಬರಿಗೂ ನಿನ್ನ ಭಕ್ತರಾಣೆ ।।ಪ।।

    ನಿನ್ನಾ ಬಿಟ್ಟು ಅನ್ಯರ ಭಜಿಸಿದರೆ ಎನಗೆ ಆಣೆ ರಂಗ
    ಎನ್ನ ನೀ ಕೈಬಿಟ್ಟು ಹೋದರೆ ನಿನಗೆ ಆಣೆ ।।ಅ .ಪ।।

    ತನು ಮನ ಧನದಲಿ ವಂಚಿತನಾಧರೆ ಎನಗೆ ಆಣೆ ರಂಗ
    ಮನಸು ನಿನ್ನಲಿ ನಿಲಿಸದಿದ್ದರೆ ನಿನಗೆ ಆಣೆ ।।

    ಕಾಕೂ ಮನುಜರ ಸಂಗ ಮಾಡಿದರೆನಗೆ ಆಣೆ ರಂಗ
    ಲೌಕಿಕವ ನೀ ಬಿಡಿಸದಿದ್ದರೆ ನಿನಗೆ ಆಣೆ ।।

    ಶಿಷ್ಟರ ಸಂಗವ ಮಾಡದಿದ್ದರೆ ಎನಗೆ ಆಣೆ ರಂಗ
    ದುಷ್ಟರ ಸಂಗವ ಬಿಡಿಸದಿದ್ದರೆ ನಿನಗೆ ಆಣೆ ।।

    ಹರಿ ನಿನ್ನಾಶ್ರಯ ಮಾಡದಿದ್ದರೆ ಎನಗೆ ಆಣೆ ರಂಗ
    ಪುರಂದರ ವಿಠಲ ನೀ ಒಲಿಯದಿದ್ದರೆ ನಿನಗೆ ಆಣೆ ।।

    LYRICS IN ENGLISH :
    Enagoo Aane Ranga Ninagoo Aane
    Enagoo Ninagoo Ibbarigoo Ninna Bhaktaraane

    Ninna Bittu Anyara Bhajisidarenage Aane Ranga
    Enna Nee Kai Bittu Hodare Ninage Aane ।।

    Tanu Manadali Vancitanaadare Enage Aane Ranga
    Manasu Ninnali Nilisadiddare Ninage Aane।।

    Kaaku Manujara Sangava Maadidarenage Aane Ranga
    Loukikava Nee Bidisadiddare Ninage Aane ।।

    Shishtara Sangava Madadiddare Enage Aane Ranga
    Dushtara Sangava Bidisadiddare Ninage Aane।।

    Hari Ninnashraya Maadadiddare Enage Aane Ranga
    Purandara Vithala Neenoliyadiddare Ninage Aane ||

  • Poorva Janmadali Naa Maadida | ಪೂರ್ವ ಜನ್ಮದಲಿ ನಾ ಮಾಡಿದ ಕರ್ಮದಿಂ

    ಪೂರ್ವ ಜನ್ಮದಲಿ ನಾ ಮಾಡಿದ ಪಾಪದಿಂ ದುರ್ವಿಯೊಳು ಜನಿಸಿದೆನು ಕೃಷ್ಣ|| ಪ||

    ಕಾರುಣ್ಯ ನಿಧಿ ಎನ್ನ ಕಾಯಬೇಕಯ್ಯ ಹರಿ ವಾರಿಜ ನಾಭ ಶ್ರೀ ಕೃಷ್ಣ|| ಅ.ಪ||

    ಹುಟ್ಟಿದಂದಿಂದಿಗು ಸುಖವೆಂಬುದನು ಅರಿಯೆ ಕಷ್ಟ ಪಡುತಿಹೆನಯ್ಯ ಕೃಷ್ಣಾ|
    ದಟ್ಟ ದಾರಿದ್ರ್ಯ ವನು ಪರಿಹರಿಸದಿರೆ ದೂರು ತಟ್ಟುವುದು ನಿನಗಯ್ಯ ಕೃಷ್ಣ|
    ಕಾಸಿನ ಆಸೆಯನು ಮಾಡಿ ಬಹುದಿನದಿಂದ ಆಯಾಸದೊಳಗಿಹೆನು ಕೃಷ್ಣ|
    ಆಸೆಯನು ಬಿಡಿಸೆಮಗೆ ದೋಷ ವನು ಪರಿಹರಿಸು ಸಾಸಿರ ನಾಮದ ಶ್ರೀ ಕೃಷ್ಣ||೧||

    ಪೂರ್ವ ಜನ್ಮದಲಿ ನಾ ಮಾಡಿದ ಪಾಪದಿಂ ದುರ್ವಿಯೊಳು ಜನಿಸಿದೆನು ಕೃಷ್ಣ|| ಪ||

    ಮುಟ್ಟಲಂಜುವರು ಬಂದುಗಳು ಕಂಡರೆ ಎನ್ನ ಅಟ್ಟಿಕೊಳುತಿಹರಯ್ಯ ಕೃಷ್ಣ|
    ತೊಟ್ಟಿಲ ಶಿಶು ಬಾಯ ಬಿಡುವತೆರೆದಂತೆ ಕಂಗೆಟ್ಟು ಶೋಕಿಸುವೆನು ಕೃಷ್ಣ|
    ತಂದೆ ತಾಯಿ ಯು ಇಲ್ಲ ಬಂದು ಬಳಗವು ಇಲ್ಲ ಇಂದೆನಗೆ ಗತಿಯೇನು ಕೃಷ್ಣ|
    ಮಂದರಧರ ಶ್ರೀ ಪುರಂದರ ವಿಠ್ಠಲ ನೀ ಬಂದು ನೆಲೆಯಾಗಯ್ಯ ಕೃಷ್ಣ||೨||

    ಪೂರ್ವ ಜನ್ಮದಲಿ ನಾ ಮಾಡಿದ ಪಾಪದಿಂ ದುರ್ವಿಯೊಳು ಜನಿಸಿದೆನು ಕೃಷ್ಣ|| ಪ||

    ಕೃಷ್ಣ ಕೃಷ್ಣ ಕೃಷ್ಣ

    This song makes you to realize on what purpose u are leaving, what will happen when you are aged and what for u leaved and achieved, and what u should have done and must do, Purandaradasaru easily made us to understand through this song. 
    Dasarapadagalu is a realization.


    Song: Poorva Janmadali Naa Maadida

    Artiste : Puttur Narasimha Nayak

    Lyrics : Purandara Dasaru

    Music : Puttur Narasimha Nayak

    Label : Sagar Music